toredu jeevisa
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ.
1 ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು,
ದಾಯಾದಿ ಬಂಧುಗಳ ಬಿಡಲು ಬಹುದು,
ರಾಯತಾ ಮುನಿದರೆ ರಾಜ್ಯವನೆ ಬಿಡಬಹುದು,
ಕಾಯಜಾ ಪಿತ ನಿನ್ನ ಅಡಿಯ ಬಿಡಲಾಗದು.(ತೊರೆದು)
2 ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು,
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು,
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು,
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು.(ತೊರೆದು)
3 ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು,
ಮಾನದಲಿ ಮನವ ತಗ್ಗಿಸಲು ಬಹುದು,
ಪ್ರಾಣನಾಯಕನಾದ ಆದಿ ಕೇಶವರಾಯ,
ಜಾಣ ಶ್ರೀ ಕೃಷ್ಣ ನಿನ್ನಡಿಯ ಬಿಡಲಾಗದು.(ತೊರೆದು)