ಮೂಡಲ ಮನೆಯ ...

Created: by Pradeep Gowda Updated: Jun 11, 2020

ಚಿತ್ರ: ಬೆಳ್ಳಿ ಮೋಡ, 1967 Youtube video

ಕವಿ: ದ. ರಾ. ಬೇಂದ್ರೆ

ಮೂಡಲ ಮನೆಯ ಮುತ್ತಿನ ನೀರಿನ

ಎರಕಾವಾ ಹೊಯ್ದ, ನನ್ನನೆ ಎರಕಾವಾ ಹೊಯ್ದ

ಬಾಗಿಲ ತೆರೆದು ಬೆಳಕು ಹರಿದು

ಜಗವೆಲ್ಲಾ ತೊಯ್ದ, ದೇವನು ಜಗವೆಲ್ಲಾ ತೊಯ್ದ

ಎಳೆಗಳ ಮೇಲೆ, ಹೂಗಳ ಒಳಗೆ

ಅಮ್ರಿತದಾ ಬಿಂದು, ಕಂಡವು ಅಮ್ರಿತದಾ ಬಿಂದು

ಯಾರಿರಿಸಿಹರು ಮುಗಿಲಿನ ಮೇಲಿಂದ

ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು

ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು

ಹೊರಟಿತು ಹಕ್ಕಿಗಳ ಹಾಡು

ಗಂಧರ್ವ ಸೀಮೆಯಾಯಿತು, ಕಾಡಿನ ನಾಡು

ಕ್ಷಣದೊಳು, ಕಾಡಿನ ನಾಡು


Notes: